ನಯನಾಡು ಸ.ಪ.ಪೂ.ಕಾಲೇಜು ವನ ಮಹೋತ್ಸವ
ಬಂಟ್ವಾಳ: ಪಿಲಾತಬೆಟ್ಟು, ನಯನಾಡು ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಎನ್ಜಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವನ ಮಹೋತ್ಸವ ಕಾರ್ಯಕ್ರಮ ಕಾಲೇಜು ಆವರಣದಲ್ಲಿ ಜರಗಿತು.
ಚಾರಿಟೇಬಲ್ ಟ್ರಸ್ಟ್ ಹಿರಿಯ ಸದಸ್ಯ ಮಾರ್ಕ್ಡಿ ಸಿಲ್ವಾ ಅವರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬಳಿಕ ಕಾಲೇಜಿನಲ್ಲಿ ನಡೆದ ಆಟಿಡೊಂಜಿಕೂಟ ಕಾರ್ಯಕ್ರಮದಲ್ಲಿ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಸದಸ್ಯ ಲಕ್ಷ್ಮಿ ನಾರಾಯಣ ಹೆಗ್ಡೆ, ಉದ್ಯಮಿ ಹರೀಂದ್ರ ಪೈ, ಉದ್ಯಮಿ ನೆಲ್ವಿಸ್ಟರ್ ಪಿಂಟೊ, ಪ್ರಮುಖರಾದ ಅಂಬ್ರೋಸ್ ಮೊರಾಸ್, ಹರೀಶ್ ಶೆಟ್ಟಿ, ಹರೀಶ್ ಪೂಜಾರಿ, ಆನಂದ, ರಮಾನಂದ ಮೂಲ್ಯ ಮತ್ತಿತರರು ಭಾಗವಹಿಸಿದ್ದರು.
ಉಪನ್ಯಾಸಕ ರಮೇಶ್ ಮೂಲ್ಯ ಸ್ವಾಗತಿಸಿದರು. ಉಪನ್ಯಾಸಕಿ ಪವಿತ್ರಾ ವಂದಿಸಿದರು. ರಾಧಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಿಗೆ ಮತ್ತು ಗ್ರಾಮಸ್ಥರಿಗೆ ಸಸಿಗಳನ್ನು ವಿತರಿಸಲಾಯಿತು.