3 years ago
445 Views
Success Projects – Medical Camp
NGO

–  ಬೃಹತ್ ವೈದ್ಯಕೀಯ ಶಿಬಿರ ‘ವೈದ್ಯಕೀಯ ಶಿಬಿರದಿಂದ ಸಾಮಾಜಿಕ ಸಾಮರಸ್ಯ’

 

ಪುಂಜಾಲಕಟ್ಟೆ . 31: ಬಂಟ್ವಾಳ ತಾ| ಪಿಲಾತಬೆಟ್ಟು ಗ್ರಾಮದ ನಯನಾಡು ಎನ್‌.ಜಿ. ಚಾರಿಟೆಬಲ್ಟ್ರಸ್ಟ್ ಆಶ್ರಯದಲ್ಲಿ ಶ್ರೀ ರಾಮ ಯುವಕ ಸಂಘ ನಯನಾಡು, ಭಾರತೀಯ ಕೆಥೋಲಿಕ್ಯುವ ಸಂಚಲನ ನಯನಾಡು ಘಟಕ ಇದರ ಸಹಯೋಗದಲ್ಲಿ ಮಂಗಳೂರು ಕೆ.ಎಂ.ಸಿ. ಆಸ್ಪತ್ರೆ ಹಾಗೂ ಕೆ.ಎಂ.ಸಿ. ಸಮುದಾಯ ದಂತ ಆರೋಗ್ಯ ವಿಭಾಗದ ವೈದ್ಯರ ತಂಡದಿಂದ ಬೃಹತ್ಉಚಿತ ವೈದ್ಯಕೀಯ, ದಂತ ಚಿಕಿತ್ಸಾ ಹಾಗೂ ರಕ್ತದಾನ ಶಿಬಿರ ನಯನಾಡು ಸಂತ ಜೋಸೆಫರ ಹಿ.ಪ್ರಾ. ಶಾಲಾ ಸಭಾಂಗಣದಲ್ಲಿ ಜರಗಿತು.
ಪಿಂಗಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕ, ಹ್ಯುಮೇನಿಟಿ ಫೌಂಡೇಶನ್ ಸಂಸ್ಥಾಪಕ ರೋಶನ್ಡಿಸೋಜಾ ಬೆಳ್ಮಣ್ಅವರು ಉದ್ಘಾಟಿಸಿ, ಶ್ರೀ ರಾಮ ಯುವಕ ಸಂಘ ಹಾಗೂ ಕೆಥೋಲಿಕ್ಯುವ ಸಂಚಾಲನ ಸಮಿತಿ ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವು ಸಮಾಜದ ಸಾಮರಸ್ಯಕ್ಕೆ ಮಾದರಿಯಾಗಿದೆ ಎಂದರು.
ನಯನಾಡು ಸಂತ ಅಸ್ಸಿಸಿ ಚರ್ಚ್ಧರ್ಮಗುರು ವಂ| ಸಂತೋಷ್ಮಿನೆಜಸ್ಅಧ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಸಿ| ಮೋಂತಿ, ಪಿಲಾತಬೆಟ್ಟು ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ಶೆಟ್ಟಿ ಕುಮಂಗಿಲ, ಚರ್ಚ್ಪಾಲನ ಸಮಿತಿ ಉಪಾಧ್ಯಕ್ಷ ಸೈಮನ್ಮೋರಾಸ್‌, ಎನ್‌.ಜಿ. ಟ್ರಸ್ಟ್ ಸಂಸ್ಥಾಪಕ  ನವೀನ್‌ ಅರುಣ್‌ ಗಲ್ಬಾಂವೋ, ಭಾರತೀಯ ಕೆಥೋಲಿಕ್ಯುವ ಸಂಚಲನ ನಯನಾಡು ಘಟಕದ ಅಧ್ಯಕ್ಷ ಅಲೆನ್ಡಿಸೋಜಾ, ಶ್ರೀರಾಮ ಯುವಕ ಸಂಘದ ಅಧ್ಯಕ್ಷ ದಯಾನಂದ್ನಿನ್ನಿಕಲ್ಲು, ಗ್ರಾ.ಪಂ. ಸದಸ್ಯ, ಯುವಕ ಸಂಘದ ಗೌರವಾಧ್ಯಕ್ಷ ಲಕ್ಷ್ಮೀನಾರಾಯಣ ಹೆಗ್ಡೆ ನಿನ್ನಿಕಲ್ಲು,  ಕೆ.ಎಂ.ಸಿ. ನೇತ್ರತಜ್ಞ ಡಾ| ಕೀರ್ತನ್ರಾವ್‌, .ಸಿ.ವೈ.ಎಂ. ನಿರ್ದೇಶಕ ವಂ| ರೊನಾಲ್ಡ್ಪ್ರಕಾಶ್ಡಿಸೋಜಾ, ಅಧ್ಯಕ್ಷ ಜೈಸನ್ಪಿರೇರಾ ಹಾಗೂ ಕಾರ್ಯದರ್ಶಿ ಫೆವಿಷಾ ಮೊಂತೆರೊ ಉಪಸ್ಥಿತರಿದ್ದರು.

ಸಹಾಯಧನ, ಸಮ್ಮಾನ
ರಸ್ತೆ ಅಪಘಾತಕ್ಕಿಡಾಗಿ ಮೃತಪಟ್ಟ ರವೂಫ್ನೇರಳಕಟ್ಟೆ ಅವರ ಮನೆಯವರಿಗೆ ಎನ್‌.ಜಿ. ನಯನ್ಟ್ರಸ್ಟ್ವತಿಯಿಂದ ಸಹಾಯಧನ ವಿತರಿಸಲಾಯಿತು. ಸಮಾಜ ಸೇವಕ ರೋಶನ್ಡಿಸೋಜಾ ಅವರನ್ನು ಸಮ್ಮಾನಿಸಲಾಯಿತು. ಶಿಬಿರದಲ್ಲಿ 221 ಮಂದಿ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಸಲಾಯಿತು. ಸುಮಾರು 53 ಮಂದಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು. ರಕ್ತದಾನ ಶಿಬಿರದಲ್ಲಿ 38 ಮಂದಿ ಭಾಗವಹಿಸಿದ್ದರು.
ಚರ್ಚ್ಪಾಲನ ಸಮಿತಿಯ ಉಪಾಧ್ಯಕ್ಷ ಸೈಮನ್ಮೋರಸ್ಸ್ವಾಗತಿಸಿ, ಯುವಕ ಸಂಘದ ಸದಸ್ಯ ಹರೀಶ್ಶೆಟ್ಟಿ ನಯನಾಡು ನಿರೂಪಿಸಿದರು.

948 * * * * * * * * *
Add to favorites
Add to compare
Report abuse
NG, 1st floor, Manar Mansion Building, Hampankatta, Mangalore
Follow our social media
© 2025 NG WORLD. All rights reserved.